[Advaita-l] Realizing the Truth

V Subrahmanian v.subrahmanian at gmail.com
Wed Sep 27 13:47:27 EDT 2017


This is a beautiful poem that describes the Advaita philosophy of Sri Adi
Shankaracharya in Kannada.
Composed by: Mysore Shivaram Shastri.

"ಸುಮ್ಮನೇ ಬ್ರಹ್ಮವಾಗುವನೇ..." ತತ್ತ್ವಪದ.
=========================
ಶ್ರೀ ಆದಿಶಂಕರಾಚಾರ್ಯರ ಅದ್ವೈತಸಿದ್ಧಾಂತವನ್ನು ಕನ್ನಡದಲ್ಲಿ ಬಣ್ಣಿಸುವ ಒಂದು ಸುಂದರ
ಪದ್ಯ, ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು, ಕೇಳಿ ಬಾಯಿಪಾಠ ಮಾಡಿಕೊಂಡು ಹಾಡಬೇಕು,
ಮಕ್ಕಳಿಗೂ ಕಲಿಸಬೇಕು ಅಂತನಿಸುವ ಬಹಳ ಚಂದದ ಪದ್ಯ.
ರಚನೆ: ಮೈಸೂರು ಶಿವರಾಮ ಶಾಸ್ತ್ರಿ.
ಗಾಯನ: ವೃಂದಗಾನ.
* * *
ಸುಮ್ಮನೇ ಬ್ರಹ್ಮವಾಗುವನೇ
ಮೂಲಾಹಮ್ಮೆಲ್ಲ ಲಯವಾಗಿ
ಉಳಿಯದೆ ತಾನೆ ತಾನುಳಿಯದೆ ತಾನೆ || ಪ ||
ಸುಮ್ಮನಿದ್ದರೂ ಸುಖಿಸುವನೇ ಇದು
ನಮ್ಮದೆಂಬುದನು ಕೊಂದಿರುವೊ ಸಾಹಸನೇ
ಹೊಂದಿರುವೊ ಚಿದ್ರಸನೇ
ಸಮ್ಮಾನವನು ಮೀರಿದವನೇ ಮೃತ್ಯು
ಸಂಹಾರಿಯಾಗಿ ತಾಂಡವದೊಳಿರುವನೇ
ಕುಂಡಲಿಯ ಮೀರುವನೇ || ಸುಮ್ಮನೆ ||
ಪುಸ್ತಕವನು ಮುಚ್ಚಲಿಲ್ಲ ತಾನಾ
ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ
ಕೇಶವನಾಗಲಿಲ್ಲ
ಸುಸ್ತುಗಳ್ ಬಯಲಾಗಲಿಲ್ಲ ಪರ
ವಸ್ತುವೆಂಬುವ ನೋಡಿ ಒಳಗಾಗಲಿಲ್ಲ
ತನ್ನೊಳಗಾಗಲಿಲ್ಲ | ಸುಮ್ಮನೆ |
ಮರಣ ಭೀತಿಯ ಬೇರ ಸುಡದೆ ತನ್ನ
ಪರಮಾನಂದವನೆ ಎಲ್ಲೆಲ್ಲಿಯುಂ ನೆಡದೆ
ಎಲ್ಲೆಲ್ಲಿಯುಂ ನೆಡದೆ
ಶರೀರದೊಳಭಿಮಾನ ಬಿಡದೇ
ನಮ್ಮ ಗುರುಶಂಕರನಿಗೆ ಚಿತ್ತವನು ಒಪ್ಪಿಸದೆ
ಚಿತ್ತವನು ಒಪ್ಪಿಸದೆ | ಸುಮ್ಮನೆ |
* * *
YouTube link:
https://www.youtube.com/watch?v=c8lgi9sigSc


More information about the Advaita-l mailing list