[Advaita-l] Ajaati vaada in D.V.G.'s Manku Thimmana Kagga - Kannada

V Subrahmanian v.subrahmanian at gmail.com
Tue Dec 11 01:24:36 EST 2018


Ajaati vaada in D.V.G.'s Manku Thimmana Kagga - Kannada

In this simple expression, D V G has encapsulated the entire Vedanta
sandesha:

ರಸಧಾರೆ – ೧೩೯
05ಜುಲೈ

*ಸೃಷ್ಟಿಕತೆ  ಕಟ್ಟು ಕಥೆ ; ವಿಲಯ ಕಥೆ ಬರಿಯ ಕಥೆ |*
*ಹುಟ್ಟು ಸಾವುಗಳೊಂದೆ ಪುರುಳಿನೆರಡು ದಶೆ ||*
*ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |*
*ಸತ್ಯ ಜಗದಲಿ ಕಾಣೋ- ಮಂಕುತಿಮ್ಮ.   *

*Roughly translated: creation and of dissolution are no more than an
imagination. Birth and death alone are two faces of Truth. Consciousness
alone appears to be changing/transforming incessantly. Capture the Truth in
this play of Consciousness, O Manku Thimma. *

*ರುಳಿನೆರಡು = ಹುರುಲಿನ, ಸಾರದ ಎರಡು ಮುಖ*

*ಸೃಷ್ಟಿ ಎನ್ನುವುದು,  ಲಯ ಎನ್ನುವುದು,  ಹುಟ್ಟು ಸಾವು ಎನ್ನುವುದು ಕೇವಲ ಕಲ್ಪನಾ
ಕಥೆಗಳಷ್ಟೇ, ಪ್ರತಿನಿತ್ಯ ಪರಿವರ್ತನೆಯಾಗುವುದೇ ಸತ್ಯ ಈ ಜಗದಲ್ಲಿ. ಅದ್ದನ್ನು ಕಾಣು ಎಂದು
ಮಾನ್ಯ ಗುಂಡಪ್ಪನವರು ಒಂದು ಆದೇಶವನ್ನು ನಮಗೆ ಕೊಡುತ್ತಾರೆ ಈ ಕಗ್ಗದಲ್ಲಿ.*

*ಈ ಜಗತ್ತಿನಲ್ಲಿ ಎಲ್ಲವೂ ಮೊದಲಿನಿಂದ ಇದೆ. ಮುಂದೆಯೂ ಇರುತ್ತದೆ. ಯಾವುದಕ್ಕೂ ನಾಶವಿಲ್ಲ.
ಯಾವುದಕ್ಕೂ ಅಂತ್ಯವಿಲ್ಲ ಹಾಗಾಗಿ ಈ ಜಗತ್ತನ್ನು ಅನಂತ ಎಂದಿದ್ದಾರೆ. ನಮ್ಮ ಪೂರ್ವಜರು.
ನಮ್ಮ ಋಷಿ ಮುನಿಗಳು ಸಾಮಾನ್ಯ  ಜನರಿಗೆ,  ಇಲ್ಲಿ ಆಗುವ ರೂಪಾಂತರದ ಪ್ರಕ್ರಿಯೆಯನ್ನು
ವಿವರಿಸಿದರೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೇ ಇರಬೇಕು, ಇದಕ್ಕೆ ಹುಟ್ಟು ಸಾವು ಎಂದು
ಹೆಸರಿಟ್ಟು ಕರೆದಿರುವುದು. ಇಲ್ಲಿ ಹುಟ್ಟುಸಾವುಗಳೆಂಬುದು ಕೇವಲ ಬಾಹ್ಯ ಪರಿಕಲ್ಪನೆ.
ಎಲ್ಲವೂ ಒಂದು ರೂಪಾಂತರ ಪ್ರಕ್ರಿಯೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಇರುತ್ತದೆ. ಇದನ್ನು
ಜನ್ಮ, ಬಾಲ್ಯ, ಕೌಮಾರ್ಯ, ಯೌವನ, ಪ್ರೌಢ, ವಾರ್ಧಕ್ಯ ಮರಣ ಎಂದು ಈ ರೂಪಾಂತರದ  ಬೇರೆ ಬೇರೆ
ಹಂತಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆದು ನಮ್ಮಂಥಹ ಸಾಮಾನ್ಯರಿಗೆ ಅರ್ಥವಾಗುವಂತೆ
ಅನುವುಮಾಡಿಕೊಟ್ಟಿದ್ದಾರೆ.*

*ನಾ ಮತ್ತೆ ಮತ್ತೆ ಅದೇ ಉದಾಹರಣೆಯನ್ನು  ಕೊಡುತ್ತೇನೆ. ನೋಡಿ ಒಂದು ಮರದ ಬೀಜ ಭೂಮಿಯಲ್ಲಿ
ಹುದುಗಿ, ನೀರು ಮತ್ತು ಮಣ್ಣಿನೊಳಗೆ ಮಣ್ಣಿನ ಸಾರಗಳ ಸಂಪರ್ಕದಿಂದ, ರೂಪಾಂತರಗೊಂಡು
ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ , ಮರವಾಗಿ ಹೆಮ್ಮರವಾಗಿ ರೂಪುಗೊಳ್ಳುತ್ತದೆ. ಆ ಬೀಜವೇ
ಈ ಮರವಾಯಿತೆಂದಾದ ಮೇಲೆ ಇದು ಕೇವಲ ರೂಪಾಂತರವಷ್ಟೇ ಅಲ್ಲವೇ? ಇದನ್ನೇ ನಾವು ಎಲ್ಲ ಚರಾಚರ
ಸೃಷ್ಟಿಗೂ ಅನ್ವಯಿಸಿಕೊಳ್ಳಬಹುದು. ಒಂದು ಮಾನವ ಶಿಶು ತಾಯ  ಗರ್ಭದಲ್ಲಿ ರೂಪುಗೊಂಡು
ಭೂಪತನವಾದಂದಿನಿಂದ ಬೆಳೆದು ಮೇಲೆ ಹೇಳಿದ ಎಲ್ಲ ಹಂತಗಳನ್ನೂ ದಾಟಿ ಕೊನೆಗೆ ಒಂದು ದಿನ
ಇಲ್ಲವಾಗುವುದೂ ಸಹ ಈ ರೂಪಾಂತರದ ಪ್ರಕ್ರಿಯೆ ಅಲ್ಲದೆ ಮತ್ತೇನು. ಅಣುಗಳ ಸಮೂಹವೇ ಈ ರೂಪಗಳು
ಎಲ್ಲ ಅನುಗಳೂ ಆ ಪರಮ ಅಣುವಿನ ಒಂದು ಬಾಗವೇ ಅಲ್ಲವೇ?*

*ಆದರೆ ಮಾಯೆಯಿಂದ ನಾವು ಎಲ್ಲವನ್ನೂ ಬೇರೆ ಬೇರೆಯಾಗಿ ಗುರುತಿಸುವಂತಾಗಿದೆ. ಇದು ಆ
ಪರಮಾತ್ಮನ ಲೀಲೆ.  ನಾವೆಲ್ಲಾ ಅವನ ಲೀಲಾವಿನೋದದಲ್ಲಿ ಒಂದೊಂದು ರೂಪಗಳಷ್ಟೇ. ಇದನ್ನು
ಗಟ್ಟಿಯಾಗಿ ನಂಬಿದರೆ ನಮಗೆ ಈ ಜಗತ್ತಿನೊಂದಿಗೆ ಅತೀವವಾದ ಅಂಟು ಮತ್ತು ಅಂಟಿನಿಂದಾದ  ನಂಟು
ಇರದು. ಅಂತಹ ಸ್ಥಿತಿಯಲ್ಲಿ  ಸುಖ ದುಃಖಗಳ ಸಂಕೋಲೆಯಿಂದ ಬಿಡುಗಡೆಯಾಗಿ ಒಂದು ನಿರ್ಲಿಪ್ತ
ಆನಂದದ ಭಾವ ಇರುವುದು.*

*Read more of DVG's snippets:*

*https://tinyurl.com/ycwnjptf <https://tinyurl.com/ycwnjptf>*


More information about the Advaita-l mailing list