[Advaita-l] A Kannada article on 'Is Brahman saguna or nirguna?'

V Subrahmanian v.subrahmanian at gmail.com
Mon Sep 16 23:08:36 EDT 2019


The article can be accessed here:

https://www.facebook.com/groups/vedaonline/permalink/2399973460272251/

My comments there:

ಅತ್ಯುತ್ತಮವಾದ ವಿಚಾರ. ಚೆನ್ನಾಗಿ ಮಂಡಿಸಿದ್ದೀರಿ. ಬ್ರಹ್ಮಕ್ಕೆ ಹೇಳಲಾಗುವ ಅನಂತ ಕಲ್ಯಾಣ
ಗುಣಗಳಲ್ಲಿ ಒಂದನ್ನೂ ಕೋಡ ಜಗತ್-ಜೀವ ಇವೆರಡರ ಅವಲಂಬನೆ ಇಲ್ಲದೆ ಹೇಳಲಾಗುವುದಿಲ್ಲ. ಹೀಗೆ
ನೋಡಿದಾಗ ಬ್ರಹ್ಮವು ಸಗುಣವಾಗಬೇಕೆಂದರೆ ಜಗತ್-ಜೀವರ ಅಧೀನದಲ್ಲಿಯೆ ಹೊರತು ಸ್ವತಃ ಅಲ್ಲ.
ಮತ್ತೆ, ನಿರ್ಗುಣ ಎಂಬ ಶಬ್ದಕ್ಕೆ 'ಹೇಯ ಗುಣ ರಹಿತವಾದದ್ದು' ಎಂಬ ಅರ್ಥವೂ ಯಾವ ರೀತಿಯಲ್ಲೂ
ಹೊಂದುವುದಿಲ್ಲ. ಗುಣಗಳನ್ನು ಹೇಳಬೇಕಾದರೆ, ನೀವು ತೋರಿಸಿದ ರೀತಿಯಲ್ಲಿ, 'ಹೇಯ'
ಎನ್ನಲ್ಪಡುವ ಗುಣಗಳನ್ನೂ ಸೇರಿಸಲೇ ಬೇಕು. ಶ್ವೇತಾಶ್ವತರ ಉಪನಿಷತ್ತಿನಲ್ಲಿ, 'ನೀ ಸ್ತ್ರೀ,
ಪುರುಷ, ಕುಮಾರಿ, ಕೋಲಿಟ್ಟುಕೊಂಡು ಹೋಗುವ ಮುದುಕ' ಎಂದೂ, ಬ್ರಹ್ಮಸೂತ್ರದಲ್ಲೇ, 'ನೀನು
ಹಡಗು ಚಾಲಕ, ಮೀನುಗಾರ, ಗುಲಾಮ, ಜೂಜಾಡುವವ' ಎಂಬ ಶ್ರುತಿಯ ಉಲ್ಲೇಖವಿದೆ.
ಶ್ರೀರುದ್ರದಲ್ಲಿಯೂ ಹಾಗೆಯೆ. ಇವುಗಳನ್ನು ಬಿಟ್ಟುಬಿಟ್ಟರೆ ಬ್ರಹ್ಮದ 'ವಿಶ್ವರೂಪವು'
ಸಿದ್ದಿಸದು. 'ಭೂಃಪಾದೌ......ಸುರ ನರ ಗೋ ಭೋಗಿ ಗಂಧರ್ವ ದೈತ್ಯ .....' ಇವೆಲ್ಲ ಆ
ಪರಮಾತ್ಮನ ವಿಶ್ವತೊಮುಖ.

regards
subbu


More information about the Advaita-l mailing list