[Advaita-l] Sri Vidyaranya Jayanti - A tribute

V Subrahmanian v.subrahmanian at gmail.com
Wed May 19 01:56:29 EDT 2021


https://www.facebook.com/107840190861364/posts/323378522640862/

|| कर्नाटकसिंहासनप्रतिष्ठापनाचार्य-श्रीमद्राजाधिराजगुरु ||
(Birudavali of Sringeri Sharada Peetha)
.
अविद्याभानुसन्तप्तो विद्यारण्यमहंभजे |
यद्वाक्य खड्गैस्तत्सर्वं भिन्नंद्वैतवनं महत् ||
.
Today is Vaishaka Shukla Saptami, marks the Jayanthyotsava of 12th pontiff
of illustrious Sringeri Sharada Peetha Guruparampara, Jagadguru Sri
Vidyaranya Mahaswamin. H.H was initiated into sanyasa by 10th Jagadguru Sri
Vidyateertha Mahaswamin in 1331 A.D with Sri Vidyaranya as Yogapatta.
Jagadguru Vidyaranya started on a pilgrimage and reached Kashi. Upon
meeting Vyasa Maharshi, he went to Badari and He was initiated into "
Srividya" by Sakshath Vyasa Bhagavan. While returning south, he stayed at
Matanga Hill (near Hampi). Vedic dharma, which had received a rude shock
under Muslim , His grace helped the Harihara and Bhukkaraya to establish a
Hindu Empire i.e., Vijayanagara empire. From then on the Sringeri
Jagadgurus came to be addressed as 'Karnataka Simhasana Pratishtapanachaya
and Rajadhirajaguru' which is part of birudavali even to this day.
Jagadguru Vidyaranya marks the rise of the Sharada Peetham to the highest
of eminence and led to the emergence of the spiritual institution as the
torch torchbearer in sustaining Sanatana Dharma. Jagadguru Vidyaranya is
the Resplendent Jewel amoung Jagadgurus in the illustrious line of Sringeri
Guru Parampara.
.
Sri Vidyaranya’s literary contributions comprise works on Vyakarana,
Mimamsa, Smriti, Purana, astronomy/astrology, Mantra Sastra, music, Darsana
and Advaita Vedanta. The more important of them are Jaiminiya Nyayamala,
Parasara-smriti Vyakhyana, Smriti Sangraha, Vyavahara-Madhava, Sri
Vidyatirtha-Dipika, Vivaranaprameya Sangraha, Panchadasi, Jivanmukti
Viveka, Drig Drisya Viveka, Aparokshanubhuti-Tika, and six
Upanishad-Dipikas,
Madhaviya Shankara Vijaya is the work of Sri Vidyaranya. Because of its
high poetic merit and objectivity, it is considered the best for recitation
during Shankara Jayanti.
.
Sri Vidyaranya was indeed a unique personality, scholar and sage of highest
order, rightly regarded as a great thinker in the post-Shankara period. Let
us all remember H.H and His great contributions in reviving the Sanatana
Dharma.
.......
ಇಂದು ವೈಶಾಖ ಶುಕ್ಲ ಸಪ್ತಮಿ, ಶೃಂಗೇರಿ ಶಾರದಾಪೀಠದ ಅವಿಚ್ಛಿನ್ನ ಗುರುಪರಂಪರೆಯ 12ನೇ
ಯತಿವರೇಣ್ಯರಾದ ಜಗದ್ಗುರು ವಿದ್ಯಾರಣ್ಯ ಮಹಾಸ್ವಾಮಿಗಳ ಜಯಂತಿ. ವಿದ್ಯಾರಣ್ಯರ ಶಿಷ್ಯ
ಸ್ವೀಕಾರವು ಕ್ರಿ.ಶ 1331ರಲ್ಲಿ 10ನೇ ಜಗದ್ಗುರುಗಳಾಗಿದ್ದ ಶ್ರೀ ವಿದ್ಯಾತೀರ್ಥ
ಮಹಾಸ್ವಾಮಿಗಳಿಂದ ನೆರವೇರಿತು. ತದನಂತರ ಜಗದ್ಗುರು ಮಹಾಸ್ವಾಮಿಗಳು ಕಾಶಿಯಾತ್ರೆ ಕೈಕೊಂಡು,
ಅಲ್ಲಿ ಸಾಕ್ಷಾತ್ ವೇದವ್ಯಾಸರನ್ನ ಸಂದರ್ಶಿಸಿದರು. ಅವರ ಅಪ್ಪಣೆಯ ಮೇರೆಗೆ ಬದರಿಗೆ ಭೇಟಿ
ನೀಡಿ ಅಲ್ಲಿ ಭಗವಾನ್ ವ್ಯಾಸ ಮಹರ್ಷಿಗಳಿಂದ " ಶ್ರೀವಿದ್ಯಾ" ಉಪಾಸನೆಯ ದೀಕ್ಷೆ ಪಡೆದರು.
ನಂತರ ಭಾರತದ ದಕ್ಷಿಣ ಭಾಗವಾದ ಮಾತಂಗ ಪರ್ವತದಲ್ಲಿ (ಹಂಪಿಯ ಸಮೀಪ) ವಾಸ್ತವ್ಯ ಮಾಡಿದರು.
ಉತ್ತರ ಭಾರತವು ಮುಸಲ್ಮಾನರು ಆಕ್ರಮಣಗಳಿಗೆ ಸನಾತನ ಧರ್ಮ ಕ್ಷೀಣಿಸುತ್ತಿದ್ದ ಕಾಲವದು. ಅದರ
ಛಾಯೆ ದಕ್ಷಿಣಕ್ಕೆ ಕಾಲಿಡುತ್ತಿದೆ ಎಂದು ತಿಳಿದಾಕ್ಷಣವೇ ಮಹಾಸ್ವಾಮಿಗಳು ಹಕ್ಕರಾಯ ಮತ್ತು
ಬುಕ್ಕರಾಯರಿಗೆ ಅನುಗ್ರಹ ಮಾಡಿ ಒಂದು ಅತಿದೊಡ್ಡ ಹಿಂದೂ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀ
ಭೂತರಾದರು. ಅದುವೇ ನಮ್ಮ ವಿಜಯನಗರ ಸಾಮ್ರಾಜ್ಯ. ಆದ ಕಾರಣದಿಂದಲೇ ಇಂದಿಗೂ ಸಹ ಶೃಂಗೇರಿಯ
ಜಗದ್ಗುರು ಪೀಠಕ್ಕೆ " ಕರ್ನಾಟಕಸಿಂಹಾಸನ ಪ್ರತಿಷ್ಠಾಪಣಾಚಾರ್ಯ ಮತ್ತು ರಾಜಾಧಿರಾಜಗುರು "
ಎಂಬ ಬಿರುದುಗಳನ್ನು ಹೇಳುವುದು ವಾಡಿಕೆ. ಆದ್ದರಿಂದಲೇ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠವು
ಉಪನಿಷತ್ತುಗಳು ಜ್ಞಾನ ಪ್ರಸರಣೆ ಮಾತ್ರವಲ್ಲದೆ ಸಮಯ ಬಂದಾಗ ಸನಾತನ ಧರ್ಮಪರಿಪಾಲನೆಯ ಮತ್ತು
ರಕ್ಷಣೆಯ ಜವಾಬ್ದಾರಿಯನ್ನು ಉತ್ಕೃಷ್ಟವಾಗಿ ನಿಭಾಯಿಸುವ ಸಾಮರ್ಥ್ಯಹೊಂದಿದೆ ಎಂಬುದು
ಅರ್ಥವಾಗುತ್ತದೆ. ಶೃಂಗೇರಿ ಪೀಠದ ಎಲ್ಲಾ ಜಗದ್ಗುರುಗಳಲ್ಲಿ ಜಗದ್ಗುರು ವಿದ್ಯಾರಣ್ಯರು
ನಿಸ್ಸಂದೇಹವಾಗಿ ಒಂದು ಅನರ್ಘ್ಯರತ್ನವಾಗಿದ್ದರು ಎಂದರೆ ತಪ್ಪಾಗಲಾರದು.
.
ಜಗದ್ಗುರು ಮಹಾಸ್ವಾಮಿಗಳ ಸಾಹಿತ್ಯಿಕ ಕೊಡುಗೆಗಳು ಅಪಾರ. ವ್ಯಾಕರಣ, ಮೀಮಾಂಸ, ಸ್ಮೃತಿ,
ಪುರಾಣ, ಜ್ಯೋತಿಷ್ಯ, ಮಂತ್ರಶಾಸ್ತ್ರ ,ಸಂಗೀತ, ದರ್ಶನ ಮತ್ತು ಅದ್ವೈತ ವೇದಾಂತ
ಇವೆಲ್ಲದರಲ್ಲೂ ಅವರದ್ದೇ ಆದ ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ
ಮುಖ್ಯವಾದದ್ದು , ಜೈಮಿನಿ ನ್ಯಾಯಮಾಲ, ಪರಾಶರ-ಸ್ಮೃತಿ ವ್ಯಾಖ್ಯಾನ, ಸ್ಮೃತಿ ಸಂಗ್ರಹ,
ವ್ಯವಹಾರ-ಮಾಧವ, ಶ್ರೀ ವಿದ್ಯಾತೀರ್ಥ ದೀಪಿಕಾ, ವಿವರಣಾಪ್ರಮೇಯ ಸಂಗ್ರಹ, ಪಂಚದಶಿ,
ಜೀವನ್ಮುಕ್ತಿ ವಿವೇಕ, ದ್ರಿಗ್ ದರ್ಶನ ವಿವೇಕ, ಅಪರೋಕ್ಷಾನುಭೂತಿ-ತೀಕ ಮತ್ತು 6
ಉಪನಿಷದ್-ದೀಪಿಕಾ. ಇಂದಿಗೂ ಪ್ರತಿ ಶಂಕರಜಯಂತಿಗೆ ಪಾರಾಯಣಯೋಗ್ಯವಾದ, ಶಂಕರರ ಜೀವನ
ಚರಿತ್ರೆಯನ್ನು ಬಹಳ ಕಾವ್ಯಮಯವಾಗಿ ರಚಿಸಿರುವ " ಶ್ರೀಮಾಧವೀಯ ಶಂಕರದಿಗ್ವಿಜಯ" ಜಗದ್ಗುರು
ವಿದ್ಯಾರಣ್ಯ ಮಹಾಸ್ವಾಮಿಗಳ ಕೊಡುಗೆ ಎಂಬುದು ಗಮನಿಸಬೇಕಾದ ವಿಷಯ.
.
ಅನನ್ಯ ವ್ಯಕ್ತಿವ್ವದ ಜ್ಞಾನಿಯೂ, ಪರಮಹಂಸ ಸನ್ಯಾಸಿಯೂ ಮತ್ತು ಶ್ರೀ ಶಂಕರರ ನಂತರದ ಕಾಲದ
ಅದ್ಬುತ ದಾರ್ಶನಿಕರು ಆದ ಜಗದ್ಗುರು ವಿದ್ಯಾರಣ್ಯ ಮಹಾಸ್ವಾಮಿಗಳನ್ನು ಮತ್ತು ಸನಾತನ
ಧರ್ಮರಕ್ಷಣೆಯಲ್ಲಿನ ಅವರ ಬಹು ಪ್ರಮುಖವಾದ ಪಾತ್ರವನ್ನು ನಾವೆಲ್ಲರೂ ಸದಾ ಸ್ಮರಿಸೋಣ.
.
P.C : A rare picture of Jagadguru Vidyaranya Mahaswamin along with Sri
Sayanacharyaru and Vijayanagara King Sri Harihara.

The picture can be seen in the FB link provided above.


More information about the Advaita-l mailing list