[Advaita-l] Kannada vyakhyana of Dakshinamurti stotra

Vishwanath Hegde sunkasalvishwa at gmail.com
Wed Apr 29 04:02:46 EDT 2020


ಆತ್ಮೀಯರೇ,

'ಭೂಮಾ' ವತಿಯಿಂದ ಕಳೆದ ಹತ್ತು ಹನ್ನೆರಡು ದಿನಗಳ ಹಿಂದೆ ಪ್ರಾರಂಭಿಸಲಾದ
#ದಕ್ಷಿಣಾಮೂರ್ತಿಸ್ತೋತ್ರವ್ಯಾಖ್ಯಾನಸರಣಿ ಯು ಭಗವತ್ಪಾದ ಶಂಕರರ ಜಯಂತಿಯ ದಿನವೇ
ಸಂಪೂರ್ತಿಯನ್ನು ಕಾಣುವಂತಾಗಿದ್ದು ಸೌಭಾಗ್ಯವೇ ಸರಿ.

ವೇದಾಂತವನ್ನು ತಿಳಿದುಕೊಳ್ಳಲು ಬಯಸುವ ಜಿಜ್ಞಾಸುಗಳಿಗೆ ಶಂಕರಾಚಾರ್ಯರು ಅನೇಕ
ಪ್ರಕರಣಗ್ರಂಥಗಳನ್ನು ರಚಿಸಿಕೊಟ್ಟಿದ್ದಾರೆ. ದಕ್ಷಿಣಾಮೂರ್ತಿಸ್ತೋತ್ರವು ಸಂಪೂರ್ಣವಾಗಿ
ವೇದಾಂತಸಿದ್ಧಾಂತದ ಸಾರರೂಪದಲ್ಲಿದೆ. ಹಾಗಾಗಿ ಈ ಸ್ತೋತ್ರದ ಅರ್ಥಜ್ಞಾನವು ವೇದಾಂತಕ್ಕೆ
ಪ್ರವೇಶವನ್ನು ಒದಗಿಸುತ್ತದೆ.

ಜೊತೆಗೆ ಈ ಸ್ತೋತ್ರವು ಪಾರಾಯಣಮಾತ್ರದಿಂದಲೇ ಶ್ರೇಯಸ್ಸನ್ನು ಉಂಟುಮಾಡುವಂಥದ್ದೂ ಆಗಿದೆ.

ಇಂಥ ಸ್ತೋತ್ರದ ಅರ್ಥವಿವರಣೆಯನ್ನು ಮಾಡುವ ಪುಣ್ಯಕಾರ್ಯದಲ್ಲಿ 'ಭೂಮಾ' ತೊಡಗಿಸಿಕೊಂಡು,
ಭಗವತ್ಪಾದರ ಆಶೀರ್ವಾದದಿಂದ ಆ ಕಾರ್ಯದ ಸಂಪೂರ್ತಿಯನ್ನೂ ಕಂಡಿದೆ.

ಆಸಕ್ತರು, ಜಿಜ್ಞಾಸುಗಳಿಗೆಲ್ಲ ಇದು ಹೆಚ್ಚು ತಲುಪುವಂತಾಗಬೇಕು. ವೇದಾಂತದ ಗಂಧ ಎಲ್ಲೆಡೆ
ಪಸರಿಸಿಬೇಕು. ಅದೇ ಶಂಕರರಿಗೆ ನಾವು ಮಾಡುವ ಬಹುದೊಡ್ಡ ಸೇವೆ.

ಎಲ್ಲ ಸ್ತೋತ್ರಗಳ ವಿವರಣೆಯೂ ಒಟ್ಟಿಗೆ ಸಿಗುವಂತೆ ಇಲ್ಲಿ ಕೊಂಡಿಗಳನ್ನು ಸಂಗ್ರಹಿಸಿ
ಕೊಡಲಾಗಿದೆ.

ಎಲ್ಲರಿಗೂ ಶಂಕರಜಯಂತಿಯ ಶುಭಕಾಮನೆಗಳು.

#ಶ್ರೀಶಂಕರಃ_ಪಾತು_ನಃ

https://www.youtube.com/playlist?list=PLjhlL6tQEqLQfJI6_xR0pCqgj35NPQG0v

1. https://youtu.be/5dMJAJrlZTk

2. https://youtu.be/dd0GEf81dVg

3. https://youtu.be/T_eO8ad3EsQ

4. https://youtu.be/s92-21omdzk

5. https://youtu.be/Tn_RtcsqUoM

6. https://youtu.be/XCkKaLrAsac

7.https://youtu.be/GueYLnvqY7o

8.https://youtu.be/NCBn5n2pMA0

9.https://youtu.be/qJxWj_6fGk8

10. https://youtu.be/6bpTkB72x7E


More information about the Advaita-l mailing list