[Advaita-l] Dvaitins refutation of Advaita Principle
Krishnaprakasha Bolumbu
kpbolumbu01 at gmail.com
Fri Jun 5 06:08:24 EDT 2020
ಬ್ರಹ್ಮಸತ್ಯಂ ಜಗನ್ಮಿಥ್ಯಾ
ನಾವು ಬದುಕಿರುವ ಲೋಕವೇ ಮಿಥ್ಯೆಯೆಂಬುದು ಈ ಮಾತಿನ ಅರ್ಥವೇ?
ಬ್ರಹ್ಮಸತ್ಯಂ ಜಗನ್ಮಿಥ್ಯಾ, ಜೀವೋ ಬ್ರಹ್ಮೈವ ನಾಪರಃ - ಇದು ವೇದಾಂತಸಾರವೆಂಬುದು
ಲೋಕವಿದಿತವಾದುದು. ವೇದಗಳ ಸಾರ ಸರ್ವಸ್ವವೇ ವೇದಾಂತ ಮತ್ತು ವೇದದ ತಾತ್ಪರ್ಯನಿರ್ಣಯ
ವೇದಾಂತದಿಂದಲೇ ಆಗುತ್ತದೆ. ಬ್ರಹ್ಮವೊಂದೇ ಸತ್ಯ ಎಂದರೇನೆಂದು ಚಿಂತಿಸಬೇಕು.
ಬ್ರಹ್ಮವೆಂಬುದು ಮೂಲಸತ್ಯ. ಇದನ್ನು ಸತ್ ಎಂದೂ ಕರೆಯುತ್ತಾರೆ. ಇರುವುದನ್ನು ಇರುವುದೆಂದು
ಸಾಬೀತುಪಡಿಸುವ ಉಣ್ಮೆಯೇ ಸತ್. (ಕನ್ನಡದಲ್ಲಿ ಇರವು ಅಥವಾ ಉಣ್ಮೆ ಎಂಬ ಪದಗಳು
ರೂಢಿಯಲ್ಲಿರುವುವು.) ಅದುವೇ ಆತ್ಯಂತಿಕವಾದ ಇರವಾದ, ಉಣ್ಮೆಯೆನಿಸಿಕೊಂಡ ಪರಬ್ರಹ್ಮ.
ತೈತ್ತಿರೀಯ ಉಪನಿಷತ್ತಿನಲ್ಲಿ "ಯತೋ ವಾ ಇಮಾನಿ ಭೂತಾನಿ ಜಾಯನ್ತೇ| ಯೇನ ಜಾತಾನಿ ಜೀವನ್ತಿ |
ಯತ್ಪ್ರಯಂತ್ಯಭಿಸಂವಿಶಂತಿ |" ಎನ್ನಲಾಗಿದೆ. ಯಾವುದರಿಂದ ಜೀವಗಳು ಹುಟ್ಟುತ್ತವೆಯೋ, ಹಾಗೆ
ಹುಟ್ಟಿದ ಜೀವಗಳು ಯಾವ ಉಣ್ಮೆಯಿಂದ ನೆಲೆಗೊಳ್ಳುವುವೋ, ಯಾವುದರಲ್ಲಿ ಲಯಗೊಳ್ಳುತ್ತವೆಯೋ -
ಆ ಪರಮ ಶಬ್ದವೇ ಬ್ರಹ್ಮ. ಇತ್ತು, ಇದೆ, ಇರಲಿದೆ ಎಂಬ ಭಾವಗಳೂ ಸಕಲ ವಸ್ತುಗಳಿಗೂ
ಅನ್ವಯವಾಗುವಂಥವು. ಈ ಎಲ್ಲಾ ವಸ್ತುಗಳು ನಾಮ, ರೂಪ ಮತ್ತು ಭಾವಗಳಲ್ಲಿ
ಪ್ರಕಟಗೊಳ್ಳಬಲ್ಲುವು, ಆವಿರ್ಭವಿಸಿ ಮತ್ತು ತಿರೋಭವಿಸಬಲ್ಲುವು. ಆತ್ಯಂತಿಕವಾದ ಉಣ್ಮೆ
ಕಾಲಾತಿವರ್ತಿ, ಅದು ಕಾಲಾತೀತವಾದುದು. ಎಲ್ಲಾ ಕಾಲದಲ್ಲಿಯೂ ಇರುವ ಪರಬ್ರಹ್ಮವೇ ಪರಮಸತ್ಯ.
ಜಗತ್ತು ಮಿಥ್ಯೆಯೇ? ಇದು ಸುಳ್ಳೇ?
ಜಗತ್ತು ಮಿಥ್ಯೆ ಎಂಬುದು ಪಾರಮಾರ್ಥಿಕ. ಮಿಥ್ಯೆ ಎಂದರೆ ಇಲ್ಲದಿರುವಿಕೆ ಎಂದಲ್ಲ, ಮಿಥ್ಯೆ
ಎಂಬುದರ ಅರ್ಥ ಇಲ್ಲದಿರುವಿಕೆ ಎಂದಾಗಿದ್ದರೆ ಹೇಳುವವರಾರು, ಕೇಳುವವರಾರು/ ಗುರು ಯಾರು,
ಶಿಷ್ಯನಾರು / ವಕ್ತಾರನಾರು, ಶ್ರೋತಾರನಾರು / ಬರೆಯುವವನಾರು, ಓದುವವನಾರು ಹೀಗೆ ಹಲವು
ಸಂದೇಹಗಳು ಒದಗುತ್ತವೆ. "ಅಸತ್ವೇ ಸತಿ ಭಾಸಮಾನತ್ವಂ" ಇದು ಮಿಥ್ಯಾ ಲಕ್ಷಣ.
ಪಾರಮಾರ್ಥಿಕವಾಗಿ ಇಲ್ಲದಿದ್ದರು ಸದ್ಭಿನ್ನವಾಗಿ (ಆತ್ಯಂತಿಕವಾದ ಉಣ್ಮೆಗಿಂತ ಭಿನ್ನವಾಗಿ)
ಇಲ್ಲದಿದ್ದರೂ ಇರುವಂತೆ ತೋರಗೊಡುವಂಥದ್ದು ಮಿಥ್ಯೆ. ನಿನ್ನೆ ಇದ್ದು ಇಂದಿಲ್ಲದುದು ಮಿಥ್ಯೆ,
ಇಂದಿದ್ದು ನಾಳೆ ಇಲ್ಲದುದು ಮಿಥ್ಯೆ, ನಾಳೆ ಇದ್ದು ನಾಡಿದ್ದು ಇಲ್ಲದುದು ಮಿಥ್ಯೆ.
ಯಾವುದು "ಇದೆ, ಕಂಡುಬರುತ್ತದೆ, ಅರಿಯಲ್ಪಡುತ್ತದೆ, ವ್ಯವಹಾರ ಸಿದ್ಧಿ ಉಂಟಾಗುತ್ತದೆ,...."
ಮುಂತಾದ ಭಾವಗಳ ಮೂಲಕ ಹಾದುಹೋಗುವುದೋ, ಹಾಗಿದ್ದರೂ ಮೂಲ ಸದ್ವಸ್ತುವಿಗಿಂತ ತಾನು
ಭಿನ್ನವಲ್ಲವೋ ಅದು ಮಿಥ್ಯೆ. ದೃಷ್ಟಾಂತ: ಮಣ್ಣು ಮತ್ತು ಮಡಕೆ. ವಿವಿಧ ಆಕೃತಿಯ ನಾನಾ ರೂಪ,
ಭಾವ, ಮತ್ತು ಹೆಸರುಗಳನ್ನು ಹೊತ್ತ ಮಡಕೆಗಳನ್ನು ನುರಿತ ಕುಂಭಕಾರನು ನಿರ್ಮಿಸಬಲ್ಲನು. ಆದರೆ
ಮಣ್ಣೆಂಬ ವಸ್ತುವಿಲ್ಲದೆ ಕುಂಭಕಾರನು ಮಡಕೆಗಳನ್ನು ನಿರ್ಮಿಸಲಾರನು. ಕುಂಭಕಾರನಿಗೆ ಮಣ್ಣೇ
ಉಣ್ಮೆ. ಮೂಲಸತ್ಯವಾದ ಮಣ್ಣಿಗಿಂತ ಭಿನ್ನವಾದ ಅಸ್ತಿತ್ವ ಅವಕ್ಕಿಲ್ಲ. ಮಣ್ಣಲ್ಲದ ಅಸ್ತಿತ್ವ
ಮಡಕೆಗಿದ್ದರೆ ಅದು ಇಂದಿದ್ದು ನಾಳೆ ಇಲ್ಲವಾಗುವಂತಹುದು, ಅದಕ್ಕಿರುವುದು ಮಿಥ್ಯಾರೂಪವಾದ
ಅಸ್ತಿತ್ವ. ಆದರೆ ಮಡಕೆಗಿಂತ ಭಿನ್ನವಾದ ಅಸ್ತಿತ್ವ ಮಣ್ಣಿಗಿದೆ.
ದೃಷ್ಟಾಂತಗಳಿಗೆ ಮಿತಿಗಳಿವೆ. ಒಂದು ಹಂತಕ್ಕೆ ಹೋಲಿಕೆಗಳು ಕಂಡುಬಂದರೂ
ಸೂಕ್ಷ್ಮದೃಷ್ಟಿಯಲ್ಲಿ ಅವು ಸಮಾನವಲ್ಲವೆಂದು ಕಂಡರಿಯಬಹುದು, ದೃಷ್ಟಾಂತಗಳನ್ನು
ಸಿದ್ಧಾಂತಗಳೆಂದು ಭ್ರಮಿಸಬಾರದು. ದೃಷ್ಟಾಂತದ ಉದ್ದೇಶ ಸ್ಥೂಲತರವಾದ ಹೋಲಿಕೆಗಳನ್ನು
ತೋರ್ಪಡಿಸುವುದೊಂದೇ ಆಗಿದೆ.
ಗುರು, ಜೂನ್ 4, 2020 ರಂದು 09:56 ಅಪರಾಹ್ನ ಸಮಯಕ್ಕೆ ರಂದು Mahadevan Iyer via
Advaita-l <advaita-l at lists.advaita-vedanta.org> ಅವರು ಬರೆದಿದ್ದಾರೆ:
> Dvaitams refutation of Advaita Principle in the video below ?
> Also please explain regarding the "Upadanakaranam Argument" of
> Ramanujacharya.
>
> https://youtu.be/KQntHaBWf8g?t=936
>
> *Regards,*
> Mahadevan.N.Iyer
> _______________________________________________
> Archives: http://lists.advaita-vedanta.org/archives/advaita-l/
> http://blog.gmane.org/gmane.culture.religion.advaita
>
> To unsubscribe or change your options:
> https://lists.advaita-vedanta.org/cgi-bin/listinfo/advaita-l
>
> For assistance, contact:
> listmaster at advaita-vedanta.org
>
More information about the Advaita-l mailing list