[Advaita-l] Online Bhagavata classes in Kannada
V Subrahmanian
v.subrahmanian at gmail.com
Sun Aug 11 08:31:54 EDT 2024
ಎಲ್ಲರಿಗೂ ನಮಸ್ಕಾರಗಳು.
ಕಳೆದ ಮೂರು ವರ್ಷಗಳಿಂದ ನಮ್ಮ ಈ ಆನ್ಲೈನ್ ಸತ್ಸಂಗ ನಡೆಯುತ್ತಿದ್ದು, ಇದರ ಮೂಲಕ “ಮಾಧವೀಯ
ಶಂಕರ ದಿಗ್ವಿಜಯ ಸಾರ” , “ಧರ್ಮದ ಆಧಾರಗಳು” ಮತ್ತು “ ವೇದಾಂತ ಪ್ರಬೋಧ” ಎಂಬ ಗ್ರಂಥಗಳ
ಅಧ್ಯಯನವನ್ನು ಈಗಾಗಲೇ ಮಾಡಲಾಗಿದೆ. ಕಲಬುರಗಿಯಲ್ಲಿರುವ ಗಂಗೋತ್ರೀ ವೇದಪಾಠಶಾಲೆಯ
ಅಧ್ಯಾಪಕರಾದ ಡಾ. ಯೋಗೇಶ ಮೋಹನಭಟ್ ಜೋಷಿ ಯವರು ಈ ಮೇಲಿನ ಗ್ರಂಥಗಳ ಪಾಠ ಮಾಡಿರುತ್ತಾರೆ.
ಪ್ರಸ್ತುತ ನಮ್ಮ ಸತ್ಸಂಗವು ಶ್ರೀಮದ್ಭಾಗವತ
ಪುರಾಣದ ಪಾಠ ಆಯೋಜಿಸುತ್ತಿದೆ. ಈ ವಿಷಯವನ್ನು ಶ್ರೀ ಯೋಗೇಶ ಜೋಶಿ ಗುರುಗಳು ಪ್ರತಿವಾರ ಎರಡು
ದಿನ ಅಂದರೆ ಶನಿವಾರ ಮತ್ತು ರವಿವಾರ ರಾತ್ರಿ 9.30 ಯಿಂದ 10.15 ರ ವರೆಗೆ ಪಾಠ
ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಆಸಕ್ತರು ಈ ಕೆಳಗಿನ ಒಂದು ಗೂಗಲ್ ಫಾರ್ಮ್ ತುಂಬಿ ಕಳಿಸಿಕೊಡಬೇಕು.
ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ.
ನಮಸ್ಕಾರ.
https://forms.gle/RMW9ciQ8LoT5d11Z8
ಶ್ರೀ ಮಹೇಶ್ ಚಿಲ್ಲಾಪುರ ,
ಶಂಕರಾಧ್ಯಯನ ಸತ್ಸಂಗ
ಕಲಬುರಗಿ.
9448012597
More information about the Advaita-l mailing list