[Advaita-l] A few verses from the Sarva Vedanta Siddhanta Sara Sangraha of Shankara
V Subrahmanian
v.subrahmanian at gmail.com
Sat Sep 26 13:14:41 EDT 2020
The following short article, in Kannada, highlights a few verses from
Shankara's work. It is noteworthy that a verse says: Shuka, etc. were
freed from any kind of bondage by Shiva's grace. We have the shuka rahasya
upanishad in this regard, the link of which is provided below. This
Upanishad is also famous and doctrinally important tp Advaita since the
passage:
कार्योपाधिरयं जीवः कारणोपाधिरीश्वरः । कार्यकारणतां हित्वा
पूर्णबोधोऽवशिष्यते ॥ १२॥
teaching that both Ishwara and jiva are products of upadhi. There are many
other Advaita-friendly concepts in this Upanishad.
ಶಿವ ಪ್ರಸಾದ
'ಸರ್ವ ವೇದಾಂತ ಸಿದ್ಧಾಂತ ಸಾರ ಸಂಗ್ರಹಃ' ಎಂಬ 1006 ಶ್ಲೋಕಗಳುಳ್ಳ ಗ್ರಂಥವು ಶಂಕರಾಚಾರ್ಯ
ಪ್ರಣೀತವೆಂದು ಪ್ರಸಿದ್ಧ. ಇದರಲ್ಲಿ ವೇದಾಂತದ ಸುದೀರ್ಘ ವಿಶದೀಕರಣವಿದೆ. ಇಲ್ಲಿ ಬರುವ
ಕೆಲವು ಶ್ಲೋಕಗಳು:
https://advaitasharada.sringeri.net/.../sarvavedantasiddh...
ಶಿವನೇ ಗುರುವು, ಗುರುವೇ ಶಿವನು: ಮುಮುಕ್ಷುವು ತಾಳಬೇಕಾದ ಭಾವ ಇದು.
शिव एव गुरुः साक्षात् गुरुरेव शिवः स्वयम् ।
उभयोरन्तरं किञ्चिन्न द्रष्टव्यं मुमुक्षुभिः ॥ २५६ ॥
ಅಧ್ಯಾತ್ಮ ಪಥದಲ್ಲಿ ಸಾಗಲು ಬಂದಿರುವ ಸಾಧಕನನ್ನು ಗುರುಗಳು ಪ್ರಶಂಸಿಸುವುದು:
'ನಿನಗೆ ಶಿವ ಪ್ರಸಾದ ದೊರಕಿದೆ. ಆದ್ದರಿಂದಲೆ ಈ ಮಾರ್ಗವನ್ನು ಪ್ರವೇಶ ಮಾಡಿರುವೆ.'
धन्यः कृतार्थस्त्वमहो विवेकः
शिवप्रसादस्तव विद्यते महान् ।
विसृज्य तु प्राकृतलोकमार्गं
ब्रह्मावगन्तुं यतसे यतस्त्वम् ॥ २७८ ॥
ಮುಂದೆ ಗುರುಗಳು ಅವನಿಗೆ ಹೇಳುವುದು:
ಶಿವ ಪ್ರಸಾದದಿಂದಲೇ ಕಾರ್ಯ ಕೈಗೂಡುವುದು. ಅವನ ಪ್ರಸಾದದಿಂದಲೇ ಈ ಮಾರ್ಗಕ್ಕೆ ಬೇಕಾದ
ಬುದ್ಧಿಯು ಸಿದ್ದವಾಗುವುದು. ಆ ಪ್ರಸಾದದಿಂದಲೇ ಸಾಧನೆಗೆ ಅನುಗುಣವಾದ ಯುಕ್ತಿಯು
ಹೊಳೆಯುವುದು. ಪರಮೇಶ್ವರನ ಪ್ರಸಾದವಿಲ್ಲದೆ ಮುಕ್ತಿಯು ಸಾಧ್ಯವಿಲ್ಲ:
शिवप्रसादेन विना न सिद्धिः
शिवप्रसादेन विना न बुद्धिः ।
शिवप्रसादेन विना न युक्तिः
शिवप्रसादेन विना न मुक्तिः ॥ २७९ ॥
ಶಿವ ಪ್ರಸಾದದಿಂದ ಸರ್ವ ಬಂಧನಗಳಿಂದಲೂ ಮುಕ್ತರಾದವರು ಶುಕ ಮುಂತಾದವರು. ಆ ಶಿವನ ಪ್ರಸಾದವು
ಅನೇಕ ಜನ್ಮಗಳಲ್ಲಿ ಪ್ರಯತ್ನ ಮಾಡಿ ಹೊಂದಬೇಕಾದ್ದು. ಭಕ್ತಿಯಿಂದ ಮಾತ್ರ ಫಲಕಾರಿಯಾಗುವುದು.
ಸಂಸಾರದಿಂದ ಮುಕ್ತಿಯನ್ನೂ ಸಹ ಕೊಡಬಲ್ಲದ್ದು.
यस्य प्रसादेन विमुक्तसङ्गाः
शुकादयः संसृतिबन्धमुक्ताः ।
तस्य प्रसादो बहुजन्मलभ्यो
भक्त्यैकगम्यो भवमुक्तिहेतुः ॥ २८० ॥
ಶುಕರಹಸ್ಯೋಪನಿಷತ್ - ಇದರಲ್ಲಿ ಶುಕರಿಗೆ ಶಿವನ ಪರ ಬ್ರಹ್ಮೋಪದೇಶ;
https://sanskritdocuments.org/doc_upanishhat/shuka.html
ಓಮ್
More information about the Advaita-l mailing list